Wednesday, May 18, 2011

A Chain of mistakes

                               ತಪ್ಪುಗಳ ಸರಮಾಲೆ
ತಪ್ಪುಗಳ ಸರಮಾಲೆ ಹೆಣೆಯುತ್ತ, ಬೆಸೆಯುತ್ತ ಹೋದೆ.
ಹೇಳಲೂ ಆಗದೆ, ಎದುರಿಸಲೂ ಆಗದೆ,
ಆ ತಪ್ಪುಗಳ ಉದ್ದ ಸರಮಾಲೆಯನ್ನು
  ನಾನು ಮಾಡಿದ ತಪ್ಪುಗಳನ್ನು ತಿದ್ದುತ್ತ, ಎದುರಾಳಿ ಕೊಟ್ಟ ಚಾಟಿ ಏಟಿನಿಂದ ಮೇಲಕ್ಕೆ ಏಳಲೂ ಆಗದೆ
ಆ ತಪ್ಪುಗಳ ಸರಮಾಲೆಯನ್ನು ಹೆಣೆಯುತ್ತ ಹೋದೆ.


ಕೊಳೆತು ಹೋದ ಅವರಿವರ ತಪ್ಪುಗಳ ಶವವನ್ನು  ನನ್ನ ಗೂನು ಬೆನ್ನ ಮೇಲೆ ಹೇರಿಕೊಂಡು  ಹೊರಟೆ .
ಆ ತಪ್ಪುಗಳ ಸರಮಾಲೆಯನ್ನು
ಹೆಣೆಯುತ್ತ ಬೆಸೆಯುತ್ತ ಹೊರಟೆ...

They Moved Apart

                                                  ದೂರ ಸರಿದರು

ಸಪ್ತಪದಿಯ ಪ್ರಮಾಣಗಳನ್ನು ಸ್ವೀಕರಿಸಿದ್ದರೂ,
 ದೂರ ಸರಿದರು
ಪಿಸು ಮಾತುಗಳ ಸಂಭಾಷಣೆ,
ಯಾರಿಗೂ ಕೇಳಿಸದ ಸಂಭಾಷಣೆ ಇದ್ದರೂ ಸಹ,
ಅವರು ದೂರ ಸರಿದರು
ಮೈಲಿ ದೂರ ಜೊತೆ ಜೊತೆ ನಡೆದರೂ
ಅವರು ದೂರ ಸರಿದರು
ಉಸಿರುಗಟ್ಟಿ ಹೋಯಿತು ತಾಳಿಯ ಬಂಧನದಲ್ಲಿ, ಆ ನೂರೆಂಟು ಕನಸಿನ ಮಹಲಗಳು, ವಾಸ್ತವಕ್ಕೆ ತಟ್ಟಿ, ಅಪ್ಪಚಿಯಾಗಿ
ಒಬ್ಬರನೋಬ್ಬರೂ ಪ್ರೀತಿಸುತ್ತಿದ್ದರೂ ,
ಅಂತರಂಗ ಸತ್ಯ ಅರಿತ್ತಿದ್ದರೂ
ದೂರ ಸರಿದರು.
ಹುಚ್ಚು ದೇಹದ ಕಾವು, ಪ್ರೇಮಕ್ಕಿಂತ ದೊಡ್ಡದೆಂದು ತಿಳಿದಿದ್ದರೂ
ದೂರ ಸರಿದರು.
ಕೊಚ್ಚಿ ಹೋಯಿತು ಕಾಲನ,
ಅವರಿಬ್ಬರ ನಾನು ನಾನು ನಾನಲ್ಲಿ,
ಅಂತೂ ಅವರು ದೂರ ಸರಿದರು